ಅತಿ ಹೆಚ್ಚು ಸಂಬಳ ಪಡೆಯುವ ಏಕೈಕ ಸಿಎಂ ಯಾರು ಗೊತ್ತಾ? ಎಲ್ಲಾ ಸಿಎಂ ಗಳ ಸಂಬಳ ವಿವರ ಇಲ್ಲಿದೆ ನೋಡಿ

0
1047

ಸ್ನೇಹಿತರೆ ನಿಮಗೆಲ್ಲ ಗೊತ್ತೇ ಇದೆ ಕೊರೋನಾ ವೈರಸ್ ಮಹಾಮಾರಿ ವೈರಸ್ ನಿಂದ ಜನ ಯಾವ ರೀತಿ ತತ್ತರಿಸುತ್ತಿದ್ದಾರೆ ಎನ್ನುವುದು. ಕೊರೊನಾವೈರಸ್ ಸೋಂಕು ಹರಡದಂತೆ ಯಾವ ಯಾವ ರಾಜ್ಯದಲ್ಲಿ ಸಮರ್ಥವಾಗಿ ನಿಯಂತ್ರಣ ಸಾಧಿಸಲಾಗಿದೆ. ತಮ್ಮ ರಾಜ್ಯದ ಮುಖ್ಯಮಂತ್ರಿಗಳ ಆಡಳಿತದಿಂದ ಜನತೆ ಎಷ್ಟು ತೃಪ್ತಿಯಾಗಿದ್ದಾರೆ ಎಂಬುದರ ಬಗ್ಗೆ ಇತ್ತೀಚೆಗೆ ಬಂದ ಸಿವೋಟರ್ ಸಮೀಕ್ಷೆ ಓದಿರಬಹುದು. ಆ ಸಮೀಕ್ಷೆಯಲ್ಲಿ ಕೆಳಮಟ್ಟದಲ್ಲಿದ್ದ ಸಿಎಂವೊಬ್ಬರು ದೇಶದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಮುಖ್ಯಮಂತ್ರಿ ಎಂಬ ಅಂಶ ಬೆಳಕಿಗೆ ಬಂದಿದೆ.

2019ನೇ ಸಾಲಿನಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಂಬಳ ವಿವರಗಳನ್ನು ಇಂಡಿಯಾ.ಇನ್. ಪಿಕ್ಸೆಲ್ಸ್ ಬಹಿರಂಗಗೊಳಿಸಿ, ಭೂಪಟದಲ್ಲಿ ಚಿತ್ರಿಸಿ ಟ್ವೀಟ್ ಮಾಡಿದೆ. ಈ ಪಟ್ಟಿಯಲ್ಲಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಎಲ್ಲರಿಗಿಂತ ಹೆಚ್ಚು ಸಂಬಳ ಪಡೆಯುವ ಸಿಎಂ ಎನಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರತಿ ತಿಂಗಳಿಗೆ 4.1 ಲಕ್ಷ ರು ಗಳನ್ನು ಪಡೆಯುತ್ತಿದ್ದಾರೆ. ಸಂಬಳದಲ್ಲಿ ಮೂಲ ವೇತನ ಪ್ಲಸ್ ತುಟ್ಟಿಭತ್ಯೆ(ಡಿಎ)ಪ್ಲಸ್ ಗೃಹಭತ್ಯೆ( HRA) ಇನ್ನಿತರ ಭತ್ಯೆಗಳು ಸೇರಿವೆ.

ಸಂವಿಧಾನದ ಆರ್ಟಿಕಲ್ 164 ರಂತೆ ಮುಖ್ಯಮಂತ್ರಿಗಳ ಸಂಬಳ, ಆರ್ಟಿಕಲ್ 75 ಅನ್ವಯ ಪ್ರಧಾನಿ ಸಂಬಳ ನಿಗದಿಯಾಗುತ್ತದೆ. ಆದರೆ, ಆಯಾ ರಾಜ್ಯಗಳಲ್ಲಿ ಭತ್ಯೆಗಳನ್ನು ಹೆಚ್ಚಲು ಮಾಡಲು ಇರುವ ಕಾನೂನು ತಿದ್ದುಪಡಿಗೆ ಅವಕಾಶವಿದೆ. ಆದರೆ, ಯಾವುದೇ ಜನಪ್ರತಿನಿಧಿಗಳ ಮೂಲ ವೇತನವು ರಾಷ್ಟ್ರಪತಿಗಳ ಸಂಬಳಕ್ಕಿಂತ ಹೆಚ್ಚಿಗೆ ಇರಬಾರದು.

2019ರ ಅಂಕಿ ಅಂಶದಂತೆ ಸಂಬಳ ಪ್ರತಿ ತಿಂಗಳಿಗೆ (ಮೂಲ ವೇತನ ಮಾತ್ರ)

 • ರಾಷ್ಟ್ರಪತಿ (ರಾಮನಾಥ್ ಕೋವಿಂದ್): 5,00,000 ರು
 • ಪ್ರಧಾನಿ (ನರೇಂದ್ರ ಮೋದಿ): 2,75,000 ರು
 • ಸಿಜೆಐ(ಶರದ್ ಅರವಿಂದ್ ಬೊಬ್ಡೆ): 2,80,000ರು
 • ರಾಜ್ಯಪಾಲರು: 3,50,000ರು
 • ಸಂಸದರು: 1,00,000ರು

ಕರ್ನಾಟಕದಲ್ಲಿ ಸಂಬಳ, ಭತ್ಯೆ ವಿವರ:ಕರ್ನಾಟಕ ಶಾಸಕರ ವೇತನ, ನಿವೃತ್ತಿ ವೇತನ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ 2015ಕ್ಕೆ ತಿದ್ದುಪಡಿಯಾಗುತ್ತಿದ್ದಂತೆ ಕರ್ನಾಟಕದ ಜನಪ್ರತಿನಿಧಿಗಳ ಸಂಬಳ, ಭತ್ಯೆಯಲ್ಲಿ ಸುಮಾರು 75% ಏರಿಕೆ ಕಂಡು ಬಂದಿತ್ತು. ಮುಖ್ಯಮಂತ್ರಿ, ಸಚಿವರು, ಶಾಸಕರು, ಸಭಾಪತಿ, ವಿರೋಧ ಪಕ್ಷದ ನಾಯಕರ ವೇತನ ಹೆಚ್ಚಳವಾಗಿದೆ. ಮುಖ್ಯಮಂತ್ರಿಗಳ ಸಂಬಳ 30 ರಿಂದ 50 ಸಾವಿರಕ್ಕೆ ಏರಿಕೆಯಾಗಿತ್ತು. 2017ರಿಂದ ಇಲ್ಲಿ ತನಕ ಇದೇ ಸ್ತರದಲ್ಲಿ ಸಂಬಳ ಭತ್ಯೆ ಸಂದಾಯವಾಗುತ್ತಿದೆ. ಈ ವಿಧೇಯಕಕ್ಕೆ 1956ರಿಂದ ಹಲವು ಬಾರಿ ತಿದ್ದುಪಡಿಯಾಗಿದೆ.

ಕರ್ನಾಟಕದ ಮುಖ್ಯಮಂತ್ರಿಗಳ ವೇತನ:ಕರ್ನಾಟಕದ ಮುಖ್ಯಮಂತ್ರಿಗಳ ವೇತನ 30 ಸಾವಿರದಿಂದ 50 ಸಾವಿರಕ್ಕೆ ಏರಿಕೆಯಾಗಿದೆ. ಇದು ಕೇವಲ ಮಾಸಿಕ ವೇತನ ಮಾತ್ರ ಭತ್ಯೆಗಳು ಪ್ರತ್ಯೇಕವಾಗಿದೆ.

 • ಆತಿಥ್ಯ ಭತ್ಯೆ 1.50 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
 • ಮನೆ ಬಾಡಿಗೆ 40 ರಿಂದ 80 ಸಾವಿರಕ್ಕೆ ಹೆಚ್ಚಳ
 • ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್‌ಗೆ ಏರಿಕೆಯಾಗಿದೆ.

ಆದರೆ, ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2019ರಲ್ಲಿ ಪಡೆದ ಮೂಲ ವೇತನ ಪ್ಲಸ್ ಗೃಹಭತ್ಯೆ ಮೊತ್ತ ಪ್ರತಿ ತಿಂಗಳಿಗೆ 2 ಲಕ್ಷ ರು ಎಂದು ತೋರಿಸಲಾಗಿದೆ. ವೇತನ ತಿದ್ದುಪಡಿಯಂತೆ ತಿಂಗಳಿಗೆ ಚಂದ್ರಶೇಖರ್ ರಾವ್ ಗಿಂತಲೂ (4.1 ಲಕ್ಷ ರು) ಯಡಿಯೂರಪ್ಪ ಅವರ ಒಟ್ಟಾರೆ ಸಂಬಳ ಅಧಿಕವಾಗಲಿದೆ.

ದೇಶದ ಮುಖ್ಯಮಂತ್ರಿಗಳ ಸಂಬಳ ವಿವರ(ತಿಂಗಳಿಗೆ ಲಕ್ಷ ರುಗಳಲ್ಲಿ).

 • ಕೆ ಚಂದ್ರಶೇಖರ್ ರಾವ್-ತೆಲಂಗಾಣ-4.1
 • ಅರವಿಂದ್ ಕೇಜ್ರಿವಾಲ್-ದೆಹಲಿ-3.9
 • ಮನೋಹರ್ ಲಾಲ್ ಖಟ್ಟರ್-ಹರ್ಯಾಣ- 3.88
 • ಯೋಗಿ ಆದಿತ್ಯನಾಥ್- ಉತ್ತರಪ್ರದೇಶ-3.65
 • ಉದ್ಧವ್ ಠಾಕ್ರೆ-ಮಹಾರಾಷ್ಟ್ರ-3.4
 • ವೈಎಸ್ ಜಗನ್ ಮೋಹನ್ ರೆಡ್ಡಿ- ಆಂಧ್ರಪ್ರದೇಶ-3.35
 • ವಿಜಯ್ ರೂಪಾನಿ-ಗುಜರಾತ್- 3.21
 • ಜೈರಾಮ್ ಠಾಕೂರ್ -ಹಿಮಾಚಲ ಪ್ರದೇಶ- 3.1

3 ಲಕ್ಷ ರು ಗಿಂತ ಕಡಿಮೆ ಸಂಬಳ ಪಡೆಯುವವರು: ಹೇಮಂತ್ ಸೊರೆನ್-ಜಾರ್ಖಂಡ್- 2.72 (ಪ್ರತಿ ತಿಂಗಳಿಗೆ ಲಕ್ಷ ರುಗಳಲ್ಲಿ). ಶಿವರಾಜ್ ಸಿಂಗ್ ಚೌಹಾಣ್-ಮಧ್ಯಪ್ರದೇಶ- 2.55, ಭೂಪೇಶ್ ಬಘೇಲ್-ಛತ್ತೀಸ್ ಗಢ- 2.3, ಅಮರೀಂದರ್ ಸಿಂಗ್-ಪಂಜಾಬ್- 2.3 ಪ್ರಮೋದ್ ಸಾವಂತ್- ಗೋವಾ- 2.2. ನಿತೀಶ್ ಕುಮಾರ್ -ಬಿಹಾರ-2.15 ಮಮತಾ ಬ್ಯಾನರ್ಜಿ-ಪಶ್ಚಿಮ ಬಂಗಾಳ- 2.1. ಬಿ.ಎಸ್ ಯಡಿಯೂರಪ್ಪ-ಕರ್ನಾಟಕ -2. ಇಕೆ ಪಳನಿಸ್ವಾಮಿ-ತಮಿಳುನಾಡು-2. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ನಮ್ಮ ರಾಯಲ್ ಬೆಂಗಳೂರು ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

LEAVE A REPLY

Please enter your comment!
Please enter your name here