ಅಬ್ಬಾ! ಶಾರುಖ್ ಖಾನ್ ಪುತ್ರಿ ಡ್ರೆಸ್ ಬೆಲೆ ಕೇಳಿದರೆ ಸಾಕು ಮೈ ಜುಮ್ ಅನ್ಸುತ್ತೆ

0
356

ಬಾಲಿವುಡ್ ಖ್ಯಾತ ನಟ ಕಿಂಗ್ ಖಾನ್ ಶಾರುಖ್‌ ಖಾನ್‌ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್‌ ಅವರು ಹೊಸ ವರ್ಷಾಚರಣೆಯ ಪಾರ್ಟಿಗೆ ಧರಿಸಿದ್ದ ಕಪ್ಪು ಬಣ್ಣದ ಡ್ರ್ಯಾಗನ್‌ ಡ್ರೆಸ್‌ ಅದರ ದುಬಾರಿ ಬೆಲೆಯ ಮೂಲಕ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದೆ. ಈ ಉಡುಪಿನ ಬೆಲೆ ಬರೋಬ್ಬರಿ 2.9 ಲಕ್ಷ ರೂಪಾಯಿ ಇತ್ತೀಚೆಗಷ್ಟೇ ವಿದೇಶದಲ್ಲಿ ಪದವಿ ಮುಗಿಸಿ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧರಾಗಿರುವ ಸುಹಾನಾ ಪಾರ್ಟಿ ಫೋಟೋಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.

ಇದೀಗ ಅವರು ದುಬಾರಿ ಬೆಲೆಯ ಡ್ರೆಸ್‌ ಮೂಲಕ ಗಮನ ಸೆಳೆದಿದ್ದಾರೆ. ಆಲಿಬಾಗ್‌ನಲ್ಲಿ ನಡೆದ ನ್ಯೂ ಯಿಯರ್‌ ಪಾರ್ಟಿಯಲ್ಲಿ ಶಾರುಖ್‌ ಖಾನ್‌ ಹಾಗೂ ಸುಹಾನಾರ ಅನೇಕ ಸ್ನೇಹಿತರು ಪಾಲ್ಗೊಂಡಿದ್ದರು. ಅದರಲ್ಲಿ ಸುಹಾನಾ ಧರಿಸಿದ್ದ ಡ್ರ್ಯಾಗನ್‌ ಚಿತ್ರದ ಎಂಬ್ರಾಯ್ಡರಿ ಡಿಸೈನ್‌ನ ಉಡುಪನ್ನು ಅಂತಾರಾಷ್ಟ್ರೀಯ ಸಿಲೆಬ್ರಿಟಿ ಕಿಮ್‌ ಕರ್ದಾಶಿಯನ್‌ ಧರಿಸಿದ್ದ ಉಡುಪೊಂದರಿಂದ ಸ್ಫೂರ್ತಿಗೊಂಡು ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಪುತ್ರಿ ಸುಹಾನಾ ಖಾನ್ ಆಗಾಗ ತನ್ನ ಗ್ಲಾಮರಸ್ ಚಿತ್ರಗಳನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ದುರದೃಷ್ಟಕರ ಸಂಗತಿ ಎಂದರೆ ಆ ರೀತಿ ಮಾಡಿದಾಗಲೆಲ್ಲಾ ಟ್ರೋಲ್‍ಗೆ ಒಳಗಾಗಿದ್ದೇ ಹೆಚ್ಚು. ಈ ಹಿಂದೊಮ್ಮೆ ಎದೆ ಭಾಗ ಕಾಣುವಂತೆ ಡ್ರೆಸ್ ಮಾಡಿಕೊಂಡು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರ ಡ್ರೆಸ್ ನೋಡಿ, ಸಭ್ಯವಾಗಿರುವ ಬಟ್ಟೆ ಹಾಕಿಕೊಳ್ಳಬಹುದಲ್ಲವೇ ಕವರ್ ಅಪ್ ಎಂದಿದ್ದಾರೆ. ಒಟ್ಟಾರೆ ಸುಹಾನಾ ಡ್ರೆಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ. ಇನ್ನಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here