91ವರ್ಷದ ಬಳಿಕವೂ ಮತ್ತೆ ದೊಡ್ಡ ದಾಖಲೆ ಮಾಡಿದ ಪಾರ್ಲೆ ಜಿ ಬಿಸ್ಕೆಟ್

0
187

ಈ ದಾಖಲೆ ಎಂಬುವುದು ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಕೇಳಿಬರುತ್ತದೆ, ಆದರೆ ಈ ಕೈಗಾರಿಕೆ ಕ್ಷೇತ್ರ, ಕಂಪನಿಗಳಲ್ಲಿ ದಾಖಲೆ ಮುರಿಯುವುದು ಸುಲಭದ ಮಾತಲ್ಲ ಆದರೆ ಇದಕ್ಕೆ ವಿರುದ್ದವಾಗಿ ಪಾರ್ಲೆ-ಜಿ ಬಿಸ್ಕೆಟ್ ಕಂಪನಿಯು ತನ್ನ ವ್ಯಾಪಾರ ವಹಿವಾಟಿನಲ್ಲಿ ಯಶಸ್ಸು ಕಂಡಿದೆ. ಲಾಕ್ಡೌನ್ ಪರಿಣಾಮ ಎಲ್ಲಾ ಕೈಗಾರಿಕೆಗಳು ಮತ್ತು ಕಂಪನಿಗಳು ಬಾಗಿಲು ಮುಚ್ಚಿ ಮೂರುತಿಂಗಳಿಂದ ನಷ್ಟದ ಹಾದಿ ತುಳಿದಿದೆ. ಆದರೆ ಪಾರ್ಲೆ-ಜಿ ಬಿಸ್ಕೆಟ್ ಕಂಪನಿ ಬರೋಬ್ಬರಿ ಶೇಕಡ 80ರಿಂದ 90ರಷ್ಟು ಮಾರಾಟದಲ್ಲಿ ಏರಿಕೆ ಕಂಡಿದೆ, ಲಾಕ್ಡೌನ್ ಸಮಯದಲ್ಲಿ ಇತರ ಎಲ್ಲಾ ಬಿಸ್ಕೆಟ್ ಕಂಪನಿಗಳು ತನ್ನ ದರವನ್ನು ಏರಿಕೆ ಮಾಡಿದರೆ ಪಾರ್ಲೆ-ಜಿ ಬಿಸ್ಕೆಟ್ ಕಂಪನಿ ಮಾತ್ರ ಯಾವುದೇ ರೀತಿಯ ಬದಲಾವಣೆ ಮಾಡದೆ ಗ್ರಾಹಕರಿಗೆ ಹೆಚ್ಚು ಹೆಚ್ಚು ತಲುಪುವಂತಾಯಿತು.

ಅದಲ್ಲದೇ ಇತರ ಕಂಪನಿಗಳಾದ ಬ್ರಿಟಾನಿಯಾ ಗುಡ್ಡೆ ಬಿಸ್ಕೆಟ್, ಮಾರಿ ಗೋಲ್ಡ್ ಬಿಸ್ಕೆಟ್, ಟೈಗರ್ ಬಿಸ್ಕೆಟ್, ಮಿಲ್ಕಿ ಬಿಕಿಸ್, ಬಾರ್ಬನ್ ಬಿಸ್ಕೆಟ್ ಇತ್ಯಾದಿ ಬಿಸ್ಕೆಟ್ ಕಂಪನಿಗಳು ತನ್ನ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಅಧಿಕಗೊಳಿಸಿದರು ಸಹ, ಈ ಎಲ್ಲ ಬಿಸ್ಕೆಟ್ ಕಂಪನಿಗಳನ್ನು ಹಿಂದಿಕ್ಕಿ ಮಾರಾಟದಲ್ಲಿ ಮುಂದಿದೆ. ಅದಲ್ಲದೆ ತನ್ನ ಶೇರಿನ ಮೌಲ್ಯವನ್ನು ಶೇ5ರಷ್ಟು ಹೆಚ್ಚಿಸಿಕೊಂಡಿದೆ. ಏಪ್ರಿಲ್ ಮತ್ತು ಮೇ ತಿಂಗಳ ವ್ಯಾಪಾರ ವಹಿವಾಟು ಎಂದು ಕಂಡಿರದಂತಹ ಅತ್ಯುತ್ತಮ ವ್ಯಾಪಾರ ಮಾರಾಟವಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ವಲಸೆ ಕಾರ್ಮಿಕರ ವಲಸೆ ಹೊಟ್ಟೆ ಹಸಿವನ್ನ ನೀಗಿಸಿದ್ಧು ಇದೇ ಪಾರ್ಲೆ-ಜಿ ಬಿಸ್ಕೆಟ್, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ನಡೆದುಕೊಂಡೇ ತಮ್ಮತಮ್ಮ ಊರುಗಳಿಗೆ ಹೋಗುವಾಗ ಆಹಾರದ ಹಸಿವನ್ನು ನೀಗಿಸಲು ಇದೆ ಪಾರ್ಲೆ-ಜಿ ಬಿಸ್ಕೆಟ್ ಕಾರಣ. ಗ್ರಾಹಕರ ಮೆಚ್ಚಿನ ಬಿಸ್ಕೆಟ್ ಆದಂತಹ ಪಾರ್ಲೆ-ಜಿ ಕಂಪನಿಯ ಕಾರ್ಖಾನೆಗಳು ಭಾರತ ದೇಶದಲ್ಲಿ ಸುಮಾರು 130ಕಾರ್ಖಾನೆಗಳನ್ನು ಹೊಂದಿದೆ.

ಅದರಲ್ಲಿ ಸುಮಾ ಕನಿಷ್ಠ 120 ಕಾರ್ಖಾನೆಗಳು ಲಾಕ್ಡೌನ್ ಸಮಯದಲ್ಲಿ ನಿರಂತರವಾಗಿ ಉತ್ಪಾದನೆ ನಡೆಸುತ್ತಿದೆ, ಅತಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಪಾರ್ಲೆ-ಜಿ ಬಿಸ್ಕೆಟ್ ಪ್ರಮುಖವಾದಂತಹ ಕಾರಣ ಅದರ ಚೀಪ್ ಅಂಡ್ ಬೆಸ್ಟ್ ಎನ್ನುವ ಕಾನ್ಸೆಪ್ಟ್. ಗುಣಮಟ್ಟದಲ್ಲಿ ಯಾವುದೇ ರೀತಿಯಾದ ಬದಲಾವಣೆ ಮಾಡದೆ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಹೊಸ ಹೊಸ ಗ್ರಾಹಕರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಪರಿಣಾಮದಿಂದಾಗಿ ಆಹಾರ ಕೊರತೆಯಾದ ಕೆಲವೊಂದಷ್ಟು ಅಸಹಾಯಕ ಕುಟುಂಬಗಳಿಗೆ ಫುಡ್ ಕಿಟ್ ಸರಬರಾಜು ಮಾಡುವ ಸಂದರ್ಭದಲ್ಲಿ ಹೆಚ್ಚು ಮಾರಾಟವಾಗಿದ್ದು ಇದೇ ಪಾರ್ಲೆ-ಜಿ ಬಿಸ್ಕೆಟ್, ಜೊತೆಗೆ ಪ್ರಮುಖವಾದ ವಿಚಾರವೆಂದರೆ ಪಾರ್ಲೆ-ಜಿ ಕಂಪನಿ ಆರಂಭವಾಗಿ 91ವರ್ಷಗಳಾದರೂ ಸಹ ತನ್ನ ವ್ಯಾಪಾರ ವಹಿವಾಟಿನಲ್ಲಿ ದಾಖಲೆಯಾಗಿದ್ದು ಇದೇ ವರ್ಷದಲ್ಲಿ ಎಂಬತ್ತೆರಡು ವರ್ಷಗಳ ವ್ಯಾಪಾರ ವಹಿವಾಟಿನಲ್ಲಿ ಅತಿ ಹೆಚ್ಚು ವ್ಯಾಪಾರ-ವಹಿವಾಟು ಆಗಿರುವಂತಹ ದಾಖಲೆಯನ್ನು ಸರಿಗಟ್ಟಿದೆ ಎಂದು ಸಂಸ್ಥೆ ತಿಳಿಸಿದೆ.

LEAVE A REPLY

Please enter your comment!
Please enter your name here